ಮೊನ್ನೆ ಜಯನಗರಕ್ಕೆ ಹೋಗಬೇಕಾಯಿತು. ಸರಿ, ನನ್ನ ಮಗಳಿಗೆ ಹೇಳಿದೆ ಹೋಗಿ ಬರ್ತೆನೆ ಎಂದು. ಅವಳು ಹೇಳಿದಳು, “ಅಮ್ಮ ಒಬ್ಬೊಬ್ಬಳ್ಳೇ ಹೋಗಬೇಡ ನಾನು ಬರುತ್ತೀನಿ” ಅಂತ ಗಾಡಿ ತೆಗೆದು ಹೊರಟಳು.
ಮನಸ್ಸಿನಲ್ಲಿ ಯೋಚನೆ ಬಂತು, ಐವತ್ತು ಆದ ಕೂಡಲೆ ನನಗೆ ವಯ್ಯಸ್ಸಾಯಿತೆ? ಅಥವ ನನ್ನ ಮಗಳಿಗೆ ನಾನು ವಯ್ಯಸಾದ ಹಾಗೆ ಕಾಣುತ್ತೇನೆಯೆ? ಇಷ್ಟು ದಿನ ಒಬ್ಬಳೆ ಹೋಗುತ್ತಿದ್ದೆ, ಆಗ ಏನು ಹೇಳುತ್ತಿರಲಿಲ್ಲ, ಈಗ ಅವಳ ಕಾಳಜಿ ನೋಡಿ ಆಶ್ಚರ್ಯವಾಯಿತು.
ಗಾಡಿಯಲ್ಲಿ ಕೂರುವಾಗ ಮಗಳು ಹೇಳಿದಳು, “ಅಮ್ಮ ಹುಷಾರು, ಸರಿಯಾಗಿ ಕಂಬಿ ಹಿಡಿದು ಕೂರು”. ನಾನು ನಸುನಕ್ಕೆ ವಯಸ್ಸಾಯಿತೆಂದು.
ಬನಗಿರಿ ಏರು ರಸ್ತೆಯಲ್ಲಿ ಹೋಗುವಾಗ, ನನ್ನ ತಲೆ ಐವತ್ತು ವಯ್ಯಸಾದ ನಂತರದ ಜೀವನದ ಬಗ್ಗೆ ಯೋಚಿಸುತ್ತಿತ್ತು.
ಜಯನಗರದಲ್ಲಿ ರಸ್ತೆ ದಾಟಲು ಹೊರಟೆ. ಗಾಡಿ ನಿಲ್ಲಿಸುತ್ತಿದ್ದ ಮಗಳೆಂದಳು “ಅಮ್ಮ ಸ್ವಲ್ಪ ತಡಿ, ನಾನು ಜೊತೆಯಲ್ಲಿ ಬರುತ್ತೀನಿ” ಎಂದು.
ರಸ್ತೆ ದಾಟುವಾಗ ಎಂದೂ ಹಿಡಿಯದ ಕೈ ಹಿಡಿದು, ಹುಷಾರಾಗಿ ರಸ್ತೆ ದಾಟಿಸಿದಳು.
ಅವಳು ಸಣ್ಣವಳಿದ್ದಾಗ ನಾನು ಅವಳ ಕೈ ಹಿಡಿದು ರಸ್ತೆ ದಾಟಿಸುತ್ತಿದದ್ದು ನೆನಪಾಯಿತು.
ನನ್ನ ಕೈ ಹಿಡಿದ ಅವಳ ಕೈ ನೋಡುತ್ತ, ನಾನು ಅವಳ ಮುಖ ನೋಡಿದೆ. ಅವಳ ಮುಖದಲ್ಲಿ ಎಂದೂ ಕಾಣದ ದೃಡತೆ, ಕಾಳಜಿ ಕಂಡು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದು ಮುಂದೆ ನಡೆದೆ.

No comments:
Post a Comment